ಒಂದು ರಾಜ್ಯವಿದೆ, ಅದು ನನ್ನ ರಾಜ್ಯ, ಆ ರಾಜ್ಯಕ್ಕೆ ನಾನು ಹಗಲಿರುಳೆನ್ನದೆ ಆಗಾಗ ಭೇಟಿ ಕೊಡುತ್ತಿರುತ್ತೇನೆ. ಅಲ್ಲಿ ಕೆಲವೊಮ್ಮೆ ಕಹಿ ಅನುಭವ , ಕೆಲವೊಮ್ಮೆ ಸಿಹಿ ಸಿಹಿ ..... ಅದೇ ನನ್ನ ಕನಸಿನ ಸಾಮ್ರಾಜ್ಯ. ನೆನ್ನೆ ಬೆಳಿಗ್ಗೆ ನನ್ನ ಚಪ್ಪಲಿ ಕಿತ್ತೋಯ್ತು ಕಣ್ರೀ, ನಾನು ಅದನ್ನ ಹೊಲಿಗೆ ಹಾಕ್ಸೋಣ ಅಂದ್ಕೊಂಡೆ . ಆದ್ರೆ ಸಮಯಾನೆ ಸಿಗ್ಲಿಲ್ಲ . ಇದೇ ಗುಂಗಿನಲ್ಲಿ ರಾತ್ರಿ ನಿದ್ರೆಗೆ ಜಾರಿದೆ ... ಅದೇ ನನ್ನ ಕನಸಿನ ಸಾಮ್ರಾಜ್ಯಕ್ಕೆ.
ಅಲ್ಲ ಕಣ್ರೀ, ಆ ನನ್ನ ಸಾಮ್ರಾಜ್ಯಕ್ಕೆ ನನ್ನಜೊತೆಗೆ ಆ ಕಿತ್ತೋಗಿರೋ ಚಪ್ಪ್ಲೀನು ಬಂದುಬಿಡೋದಾ ...