Tuesday, November 2, 2010

matte... shuru....

 ಹಲವು ದಿನಗಳಿಂದ ಕಳೆದು ಹೋಗಿದ್ದ ನಿಮ್ಮವ ಮತ್ತೆ ಬರ್ತಿದೀನಿ ............................



                                ಅದಷ್ಟೂ ಬೇಗ .... ಕಾಯ್ತಿರಿ.......

                                                                                                                     - ನಿಮ್ಮವ 

Monday, November 9, 2009


ದುಃ - ಉಲ್ಲಾಸ...


ಖಾಯಿಲೆಯಿಂದ ನರಳಾಡುತ್ತಾ, ಕಣ್ಣೀರಿಡುತ್ತಿದ್ದ ತಾತನ ಬಾಧೆಯನ್ನು ನೋಡಲಾರದೇ,
ರಸ್ತೆಯ ಕಡೆಗೆ ಮುಖ ಮಾಡಿ ಕುಳಿತಿದ್ದ ಮೊಮ್ಮಗ ದುಃಖದಿಂದಿದ್ದ .

ಆಗ,

ದಾರಿಯಲ್ಲಿ ನಡೆದುಹೋದ ಹೆಣ್ಣಿನ ಸ್ನಿಗ್ದ ಸೌಂದರ್ಯ,
ಕ್ಷಣಕಾಲ ಅವನ ಮನಸ್ಸನ್ನು ಉಲ್ಲಸಿತಗೊಳಿಸಿದ್ದು ವಿಪರ್ಯಾಸ...

ಕಾಮದ ಶಕ್ತಿ ಹಾಗೂ ಮನುಷ್ಯನ ಇಂದ್ರಿಯಗಳ ದೌರ್ಬಲ್ಯತೆಯ ಸಣ್ಣ ಪ್ರದರ್ಶನ.......ಅಷ್ಟೆ.




- ನಿಮ್ಮವ.


Wednesday, September 16, 2009



ಕಾಮ - ಕಣ್ಣು .....



ಕೆಲವ್ರು ಈ ಕಾಮಕ್ಕೆ ಕಣ್ಣಿಲ್ಲ , ಕಾಮಕ್ಕೆ ಕಣ್ಣಿಲ್ಲ , ಅಂತಾರಲ್ಲ ...



ಆದ್ರೆ ನನಗ್ಯಾಕೋ ಹಾಗನ್ನಿಸ್ತಿಲ್ಲ ಕಣ್ರೀ. ಯಾಕಂದ್ರೆ ...



ಕಾಮದ ಪ್ರಾಥಮಿಕ ಹಂತವೇ ಕಣ್ಣು-ಕಣ್ಣುಗಳ ಮಿಲನ



ಅಲ್ವೇನ್ರಿ...?



- ನಿಮ್ಮವ.

Wednesday, September 9, 2009

ನನ್ನ ಸಾಮ್ರಾಜ್ಯ...

ನನ್ನ ಸಾಮ್ರಾಜ್ಯ ...

ಒಂದು ರಾಜ್ಯವಿದೆ, ಅದು ನನ್ನ ರಾಜ್ಯ, ಆ ರಾಜ್ಯಕ್ಕೆ ನಾನು ಹಗಲಿರುಳೆನ್ನದೆ ಆಗಾಗ ಭೇಟಿ ಕೊಡುತ್ತಿರುತ್ತೇನೆ.
ಅಲ್ಲಿ ಕೆಲವೊಮ್ಮೆ ಕಹಿ ಅನುಭವ , ಕೆಲವೊಮ್ಮೆ ಸಿಹಿ ಸಿಹಿ ..... ಅದೇ ನನ್ನ ಕನಸಿನ ಸಾಮ್ರಾಜ್ಯ.


ನೆನ್ನೆ ಬೆಳಿಗ್ಗೆ ನನ್ನ ಚಪ್ಪಲಿ ಕಿತ್ತೋಯ್ತು ಕಣ್ರೀ, ನಾನು ಅದನ್ನ ಹೊಲಿಗೆ ಹಾಕ್ಸೋಣ ಅಂದ್ಕೊಂಡೆ . ಆದ್ರೆ
ಸಮಯಾನೆ ಸಿಗ್ಲಿಲ್ಲ . ಇದೇ ಗುಂಗಿನಲ್ಲಿ ರಾತ್ರಿ ನಿದ್ರೆಗೆ ಜಾರಿದೆ ... ಅದೇ ನನ್ನ ಕನಸಿನ ಸಾಮ್ರಾಜ್ಯಕ್ಕೆ.

ಅಲ್ಲ ಕಣ್ರೀ, ಆ ನನ್ನ ಸಾಮ್ರಾಜ್ಯಕ್ಕೆ ನನ್ನಜೊತೆಗೆ ಆ ಕಿತ್ತೋಗಿರೋ ಚಪ್ಪ್ಲೀನು
ಬಂದುಬಿಡೋದಾ ...







- ನಿಮ್ಮವ

Tuesday, September 8, 2009

ಹುಡುಗಿ - ಮುತ್ತು..

ಫೋನಿನಲ್ಲಿ ಹುಡುಗ-ಹುಡುಗಿಯ ಸಂಭಾಷಣೆ ಜೋರಾಗೆ ಸಾಗ್ತಿತ್ತು ,
ಹುಡುಗಿ ನಾಚುತ್ತಾ ನುಡಿದಳು ,
" ಛಿ, ಹಾಗಾ ಕಚ್ಚೋದು ..? ತುಟಿಗಳೆಲ್ಲಾ ಎಷ್ಟು ನೋವಾಗ್ತಾ ಇವೆ ಗೊತ್ತಾ ...?"
ಹುಡುಗ... ಹಿಗ್ಗಿ ಹೀರೆಕಾಯಿ .....

ಸ್ವಲ್ಪ ದಿನಗಳು ಕಳೆದನಂತರ ಹುಡುಗನಿಗೆ, ಅವಳು ಮತ್ತೊಬ್ಬನ ಜೊತೆ ಓಡಿ ಹೋಗಿ,
ಮದುವೆಯಾದದ್ದು ತಿಳಿಯಿತು .....
ಅವನಿಗೆ ಉತ್ತರ ಹೊಳೆಯಿತು ,

"ಇಬ್ಬಿಬ್ರು ಕಚ್ಚಿದ್ರೆ ನೋವಾಗ್ದೆ ಇರುತ್ತಾ ....???".

- ನಿಮ್ಮವ .

Monday, September 7, 2009

ಜೀವನ


ಜೀವನ....
ಜೀವನದ ಸತ್ಯದ ಹುಡುಕಾಟದಲ್ಲಿದ್ದ ಗೆಳೆಯನೊಬ್ಬ , ನನ್ನನ್ನೊಮ್ಮೆ ಭೇಟಿಯಾದ ...
ನಾನೆಂದೆ ,
ಜೀವನ
= ಹುಟ್ಟು + ಸಾವು .
ಸತ್ಯ ಅನ್ಸೋಲ್ವೆ .....?

-
ನಿಮ್ಮವ .